ಕನಸಿನ ಪಯಣದಲಿ ಕಣ್ಣೀರಿನ ಧಾರೆ: ಪತಿ ರಿತೇಶ್ ಮಾತು ಕೇಳಿ ವೇದಿಕೆಯಲ್ಲೇ ಕಣ್ಣೀರಿಟ್ಟ ಜೆನಿಲಿಯಾ!

Maharashtra:

Font size:

ರಾಜ ಶಿವಾಜಿ' ಟ್ರೇಲರ್ ಲಾಂಚ್‌ನಲ್ಲಿ ಭಾವುಕ ಕ್ಷಣ; ಸತಿ-ಪತಿಯ ಪ್ರೇಮಕ್ಕೆ ಸಾಕ್ಷಿಯಾದ ಮುಂಬೈ ಅಂಗಳ

ಮುಂಬೈ:

ಚಿತ್ರರಂಗದ ಮಾದರಿ ದಂಪತಿ ಎಂದೇ ಕರೆಸಿಕೊಳ್ಳುವ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಗಿದ್ದಾರೆ. ರಿತೇಶ್ ಅವರ ಬಹುಕಾಲದ ಕನಸಿನ ಚಿತ್ರ ‘ರಾಜ ಶಿವಾಜಿ’ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಪತಿಯ ಪರಿಶ್ರಮ ಹಾಗೂ ಅವರು ಪಟ್ಟ ಕಷ್ಟದ ಮಾತುಗಳನ್ನು ಕೇಳಿ ಜೆನಿಲಿಯಾ ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದ್ದಾರೆ.

ಕನಸಿನ ಪ್ರಾಜೆಕ್ಟ್‌ಗೆ ರಿತೇಶ್ ಶ್ರಮ:

ಮರಾಠ ಸಾಮ್ರಾಜ್ಯದ ಧೀಮಂತ ನಾಯಕ ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆಯನ್ನು ಆಧರಿಸಿ ಈ ಸಿನಿಮಾ ಸಿದ್ಧಗೊಂಡಿದೆ. ರಿತೇಶ್ ದೇಶ್‌ಮುಖ್ ಅವರೇ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ಅವರ ವೃತ್ತಿಜೀವನದ ಅತಿದೊಡ್ಡ ಮೈಲಿಗಲ್ಲು. ಏಪ್ರಿಲ್ 20ರಂದು ಮುಂಬೈನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಟ್ರೇಲರ್ ಬಿಡುಗಡೆ ಮಾಡಿದ ರಿತೇಶ್, ಈ ಸಿನಿಮಾ ಜರ್ನಿಯಲ್ಲಿ ತಮಗೆ ಬೆಂಬಲ ನೀಡಿದವರನ್ನು ನೆನೆದು ಗದ್ಗದಿತರಾದರು.

​"ನನ್ನ ಈ ಸುದೀರ್ಘ ಪಯಣದಲ್ಲಿ ಹೆಜ್ಜೆ ಹೆಜ್ಜೆಗೂ ಶಕ್ತಿಯಾಗಿ ನಿಂತವಳು ಜೆನಿಲಿಯಾ" ಎಂದು ರಿತೇಶ್ ಹೇಳುತ್ತಿದ್ದಂತೆ, ಪಕ್ಕದಲ್ಲೇ ನಿಂತಿದ್ದ ಜೆನಿಲಿಯಾ ಕಣ್ಣೀರು ತಡೆಯಲಾಗದೆ ಭಾವುಕರಾದರು. ಈ ದೃಶ್ಯ ಅಲ್ಲಿದ್ದ ಅತಿಥಿಗಳಾದ ಸಂಜಯ್ ದತ್ ಸೇರಿದಂತೆ ಎಲ್ಲರ ಕಣ್ಣಾಲಿಗಳು ತುಂಬಿ ಬರುವಂತೆ ಮಾಡಿತು.


ಕನ್ನಡಿಗರ ಪ್ರೀತಿಯ ಜೆನಿಲಿಯಾ:

ಪರಭಾಷಾ ನಟಿಯಾದರೂ ಜೆನಿಲಿಯಾ ಕನ್ನಡಿಗರಿಗೆ ಚಿರಪರಿಚಿತ. 2008ರಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ‘ಸತ್ಯ ಇನ್ ಲವ್’ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದ ಅವರು, ಇತ್ತೀಚೆಗೆ ಕಿರೀಟಿ ನಟನೆಯ ‘ಜೂನಿಯರ್’ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.

ಮೇ 1ಕ್ಕೆ ಗ್ರ್ಯಾಂಡ್ ರಿಲೀಸ್:

ಮುಂಬೈ ಫಿಲ್ಮ್ ಕಂಪನಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್-ಅತುಲ್ ಸಂಗೀತ ನೀಡಿದ್ದಾರೆ. ಜಿಯೋ ಸ್ಟುಡಿಯೋಸ್ ಅರ್ಪಿಸುತ್ತಿರುವ ‘ರಾಜ ಶಿವಾಜಿ’ ಚಿತ್ರವು ಕಾರ್ಮಿಕ ದಿನಾಚರಣೆಯ ಅಂಗವಾಗಿ ಮೇ 1ರಂದು ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.

Comments

Leave a Comment

Prev Post ಬ್ಯಾಡರಹಳ್ಳಿ ಬೆಂಕಿ ಮರ್ಡರ್ ಕೇಸ್: ಪ್ರಿಯಕರನ 'ಲೈವ್ ಬರ್ನಿಂಗ್' ಬಳಿಕ ವಿಷ ಕುಡಿಯಲು ಪ್ಲಾನ್ ಮಾಡಿದ್ದ ಪ್ರೇಮಪಾಶಕಿ!
Next Post ಕಸ ಹಾಕಲು' ಹೋದವಳು ಕಾಲ್ಕಿತ್ತಳು: ಪ್ರಿಯಕರನ ಜೊತೆ ಇಬ್ಬರು ಮಕ್ಕಳ ತಾಯಿ ಪರಾರಿ!

ಚಿತ್ರರಂಗದ ಕರಾಳ ಹಾದಿ: ಆ ನಿರ್ದೇಶಕ ನನ್ನನ್ನು ಅಸಭ್ಯವಾಗಿ ಮುಟ್ಟಿದ್ದ; ಕಾಸ್ಟಿಂಗ್ ಕೌಚ್ ಕಹಿ ನೆನಪು ಬಿಚ್ಚಿಟ್ಟ 'ಭದ್ರ' ನಟಿ ಡೈಸಿ ಶಾ!

ಆಡಿಷನ್ ಹೆಸರಲ್ಲಿ ನಡೆದ ಅಸಭ್ಯ ವರ್ತನೆ; ಮುಂಬೈ ಹೋಟೆಲ್‌ನಲ್ಲಿ ದಕ್ಷಿಣದ ನಿರ್ದೇಶಕನ ಕಾಮದೃಷ್ಟಿಗೆ ಬೆಚ್ಚಿಬಿದ್ದಿದ್ದ ನಟಿ ಈಗ ಆ ಕರಾಳ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ವಯಸ್ಸಿನ ಹಂಗು ಮರೆತು ಸಪ್ತಪದಿ ತುಳಿದ ಜೋಡಿ: ರಕ್ಷಣೆಗಾಗಿ ಮೈಸೂರು ಎಸ್‌ಪಿ ಮೊರೆ

ಕುಟುಂಬಸ್ಥರಿಂದ ಜೀವ ಬೆದರಿಕೆ ಆರೋಪ; 14 ವರ್ಷದ ಮಗನಿರುವ ಮಹಿಳೆ ಹಾಗೂ 22ರ ಯುವಕನ ವಿವಾಹ

ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಶೀಘ್ರದಲ್ಲೇ ಒಟಿಟಿಗೆ ಲಗ್ಗೆ: ಬಿಡುಗಡೆಯ ದಿನಾಂಕ ಮತ್ತು ಸ್ಟ್ರೀಮಿಂಗ್ ವಿವರಗಳು ಇಲ್ಲಿದೆ!

ಭರ್ಜರಿ 1700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಸಿನಿಮಾ, ಬರೋಬ್ಬರಿ 150 ಕೋಟಿ ರೂಪಾಯಿಗೆ ಒಟಿಟಿ ಹಕ್ಕುಗಳನ್ನು ಮಾರಾಟ ಮಾಡಿದ್ದು, ಕಾನೂನು ಹೋರಾಟದ ನಡುವೆಯೂ ಮೇ ತಿಂಗಳಿನಲ್ಲಿ ಡಿಜಿಟಲ್ ಪರದೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ.

ಧುರಂಧರ್’ ಅಬ್ಬರಕ್ಕೆ ಫಿದಾ ಆದ ನಿರ್ಮಾಪಕರು: ನಟ ರಾಕೇಶ್ ಬೇಡಿಗೆ ಸಿಕ್ತು ಬರೋಬ್ಬರಿ 1 ಕೋಟಿ ರೂ. ಬೋನಸ್!

ಸಂಭಾವನೆಗಿಂತಲೂ ಡಬಲ್ ಧಮಾಕಾ; ಜಮೀಲ್ ಜಮಾಲಿ ಪಾತ್ರದ ಮೋಡಿಗೆ ಮಾರುಹೋದ ಆದಿತ್ಯ ಧರ್ ಅಂಡ್ ಟೀಮ್!

ಮುಂಬೈನ 'ಸ್ಟಾರ್ ಲೋಕ'ಕ್ಕೆ ಪುಷ್ಪರಾಜನ ಎಂಟ್ರಿ: ಕೊಹ್ಲಿ-ಕತ್ರಿನಾ ಪಕ್ಕದಲ್ಲೇ ಅಲ್ಲು ಅರ್ಜುನ್ ಮನೆ! ತಿಂಗಳ ಬಾಡಿಗೆ ಕೇಳಿದ್ರೆ ದಂಗಾಗ್ತೀರಾ!

ಹೈದರಾಬಾದ್ ಬಿಟ್ಟು ಮಾಯಾನಗರಿಗೆ ಶಿಫ್ಟ್ ಆದ್ರಾ ಐಕಾನ್ ಸ್ಟಾರ್? ಸೀ-ಫೇಸಿಂಗ್ ಅಪಾರ್ಟ್‌ಮೆಂಟ್‌ನ ಲಕ್ಷಾಂತರ ರೂಪಾಯಿ ಬಾಡಿಗೆಯ ಹಿಂದಿರುವ ಅಸಲಿ ರಹಸ್ಯವೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Read all News