ಬಾಡಿಗೆ ಮನೆಯಲ್ಲೇ ಬಲಿ ಪಡೆದ 'ಬಾಡೂಟದ' ರಾಕ್ಷಸ: ಹಣದ ಹಪಾಹಪಿಗೆ ಯುಪಿಎಸ್​ಸಿ ಆಕಾಂಕ್ಷಿ ಬಲಿ!

India:

Font size:

ಕೊಂದ ಮೇಲೆ ಹೆಣದ ಬೆರಳನ್ನೇ ಲಾಕರ್‌ಗೆ ಒತ್ತಿದ ಕಟುಕ; 'ಅಕ್ಕ' ಎಂದು ಕರೆಯುತ್ತಲೇ ರಕ್ತದ ಓಕುಳಿ ಹರಿಸಿದ ಪೈಶಾಚಿಕ ಕಿರಾತಕ ಮೀನಾ!

ನವದೆಹಲಿ: ಯಾರು ನಮಗೆ ಆಶ್ರಯ ನೀಡುತ್ತಾರೋ ಅವರ ಬೆನ್ನಿಗೇ ಚೂರಿ ಹಾಕುವ ವಿಕೃತ ಮನಸ್ಥಿತಿ ಇಂದು ರಾಜಧಾನಿಯನ್ನು ಬೆಚ್ಚಿಬೀಳಿಸಿದೆ. ದೆಹಲಿಯಲ್ಲಿ ನಡೆದ ಯುಪಿಎಸ್​ಸಿ ಆಕಾಂಕ್ಷಿಯ ಹತ್ಯೆ ಮತ್ತು ಅತ್ಯಾಚಾರ ಪ್ರಕರಣದ ತನಿಖೆ ಸಾಗುತ್ತಿದ್ದಂತೆ, ಆರೋಪಿ ರಾಹುಲ್ ಮೀನಾ ಎಂಬ ಕ್ರೂರಿಯ ಅಸಲಿ ಮುಖವಾಡ ಕಳಚಿಬಿದ್ದಿದೆ. ಆತ ಪೊಲೀಸರ ಮುಂದೆ ನೀಡುತ್ತಿರುವ ಹೇಳಿಕೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿದ್ದು, ಕ್ರೈಂ ಲೋಕದ ಭೀಕರತೆಯನ್ನು ಅನಾವರಣಗೊಳಿಸಿವೆ.

'ಅಕ್ಕ' ಎನ್ನುತ್ತಲೇ ಕತ್ತು ಹಿಸುಕಿದ ಪಾಪಿ!

​ವಿಚಾರಣೆ ವೇಳೆ ಕಿಂಚಿತ್ತೂ ಪಶ್ಚಾತ್ತಾಪವಿಲ್ಲದಂತೆ ಮಾತನಾಡುತ್ತಿರುವ ರಾಹುಲ್ ಮೀನಾ, ಕೊಲೆಯಾದ ಯುವತಿಯನ್ನು "ಅಕ್ಕ" ಎಂದು ಕರೆಯುತ್ತಿದ್ದಾನೆ. "ಆ ಅಕ್ಕ ಕೇಳಿದಷ್ಟು ಹಣ ಕೊಟ್ಟಿದ್ದರೆ ನಾನು ಕೊಲೆ ಮಾಡುತ್ತಿರಲಿಲ್ಲ" ಎಂಬ ಆತನ ವಾದ ಕೇಳಿ ಖುದ್ದು ಪೊಲೀಸರೇ ಹೌಹಾರಿದ್ದಾರೆ. ದರೋಡೆ ಮಾಡುವ ಉದ್ದೇಶದಿಂದ ಮನೆಯೊಳಗೆ ನುಗ್ಗಿದ್ದ ಈತನಿಗೆ ಯುವತಿ ಪ್ರತಿರೋಧ ಒಡ್ಡಿದ್ದೇ ಸಾವಿಗೆ ಕಾರಣವಾಯಿತು ಎಂದು ಆತ ಸಮರ್ಥಿಸಿಕೊಂಡಿದ್ದಾನೆ. ಮನೆಯಲ್ಲಿ ಸಿಕ್ಕ ದೀಪದಿಂದಲೇ ಯುವತಿಯ ತಲೆಗೆ ಹೊಡೆದು, ಆಕೆ ಪ್ರಜ್ಞೆ ತಪ್ಪಿದ ನಂತರ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.

ಹೆಣದ ಬೆರಳಲ್ಲಿ ಲಾಕರ್ ತೆರೆಯುವ ಪ್ರಯತ್ನ!

​ಹತ್ಯೆಯ ನಂತರ ಈತ ನಡೆಸಿದ ಪೈಶಾಚಿಕ ಕೃತ್ಯಗಳು ಮನುಷ್ಯ ಕುಲಕ್ಕೇ ಕಪ್ಪುಚುಕ್ಕೆ. ಯುವತಿಯ ಪ್ರಾಣಪಕ್ಷಿ ಹಾರಿಹೋದ ನಂತರ, ಆಕೆಯ ಮೃತದೇಹವನ್ನು ಕೆಳಮಹಡಿಗೆ ಎಳೆದುಕೊಂಡು ಹೋಗಿದ್ದಾನೆ. ಹಣದ ಹಪಾಹಪಿ ಎಷ್ಟಿತ್ತೆಂದರೆ, ಆಕೆಯ ರಕ್ತಸಿಕ್ತ ಬೆರಳನ್ನು ಲಾಕರ್‌ನ ಸ್ಕ್ಯಾನರ್‌ಗೆ ಒತ್ತಿ ಲಾಕರ್ ತೆರೆಯಲು ಪ್ರಯತ್ನಿಸಿದ್ದಾನೆ. ಆದರೆ ಮೃತ ದೇಹದಲ್ಲಿ ಚಲನೆ ಇಲ್ಲದ ಕಾರಣ ಸ್ಕ್ಯಾನರ್ ಕೆಲಸ ಮಾಡಿಲ್ಲ. ಕೊನೆಗೆ ಸ್ಕ್ರೂಡ್ರೈವರ್‌ನಿಂದ ಲಾಕರ್ ಒಡೆದು ಚಿನ್ನಾಭರಣ ದೋಚಿದ್ದಾನೆ.

ಸರಣಿ ಅಪರಾಧಗಳ ಹಿನ್ನೆಲೆ:

​ಈ ರಾಕ್ಷಸ ದೆಹಲಿಗೆ ಬರುವ ಮುನ್ನವೇ ತನ್ನ ಕ್ರೌರ್ಯ ಮೆರೆದಿದ್ದ. ಅಲ್ವಾರ್‌ನಲ್ಲಿ ತನ್ನ ಸ್ವಂತ ಸ್ನೇಹಿತನ ಪತ್ನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಮೊಬೈಲ್ ಕದ್ದಿದ್ದ. ಆ ಮೊಬೈಲ್ ಮಾರಿ ಬಂದ 6,000 ರೂಪಾಯಿಯಲ್ಲಿ ದೆಹಲಿಗೆ ಕ್ಯಾಬ್ ಮಾಡಿಕೊಂಡು ಬಂದಿದ್ದ ಈತನಿಗೆ ಆನ್‌ಲೈನ್ ಬೆಟ್ಟಿಂಗ್ ಚಟವಿತ್ತು. ದರೋಡೆ ಮಾಡಿದ ಹಣವನ್ನು ತನ್ನ ಕುಟುಂಬಕ್ಕೆ ತಲುಪಿಸುವ 'ಅಗತ್ಯ' ನನಗಿತ್ತು ಎಂದು ಈತ ತನ್ನ ಪಾಪದ ಕೃತ್ಯವನ್ನು ನ್ಯಾಯಸಮ್ಮತಗೊಳಿಸಲು ಯತ್ನಿಸುತ್ತಿದ್ದಾನೆ.

ಪೊಲೀಸ್ ಕಸ್ಟಡಿಯಲ್ಲಿರುವ ಮೀನಾ:

"ಆ ಮನೆಯವರು ನನಗೆ ದೇವರಂತೆ ಇದ್ದರು, ತುಂಬಾ ಒಳ್ಳೆಯವರು. ಆದರೆ ನನಗೆ ಹಣದ ತುರ್ತು ಇತ್ತು. ನಾನು ಸಿಕ್ಕಿಬೀಳುತ್ತೇನೆ ಎಂದು ಗೊತ್ತಿದ್ದರೂ ಕೃತ್ಯ ಎಸಗಿದೆ" ಎಂದು ಕೂಲಾಗಿ ಹೇಳಿಕೆ ನೀಡುತ್ತಿದ್ದಾನೆ.

​ಸದ್ಯ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಈ 'ನರಹಂತಕ'ನ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಕ್ರೂರಿಗೆ ಕಠಿಣ ಶಿಕ್ಷೆಯಾಗಲಿ ಎಂಬ ಕೂಗು ಕೇಳಿಬರುತ್ತಿದೆ.

Comments

Leave a Comment

Prev Post ಕಲ್ಪತರು ನಾಡಿನ ಕ್ರೀಡಾಂಗಣದಲ್ಲಿ 'ಡೋಪಿಂಗ್' ಭೂತ: ಶೌಚಾಲಯದಲ್ಲಿ ಸಿರಿಂಜ್‌ ಪತ್ತೆ, ಕ್ರೀಡಾಲೋಕ ಸ್ತಬ್ಧ!
Next Post ಹೆಂಡತಿಯ ರುಂಡ ಕತ್ತರಿಸಿ ಬೀದಿಬೀದಿಯಲ್ಲಿ ಮೆರವಣಿಗೆ ಮಾಡಿದ ನರರೂಪದ ರಾಕ್ಷಸ!

ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’

Kantara Chapter 1 box office: ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ 100 ಕೋಟಿಯ ಗಡಿಯತ್ತ ಸಿನಿಮಾ ದಾಪುಗಾಲು ಹಾಕಿದ್ದು ಆಯಾ ರಾಜ್ಯಗಳಲ್ಲಿ ಕೆಲ ಹೊಸ ದಾಖಲೆಗಳನ್ನು ಸಹ ಬರೆದಿದೆ. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾಗಳ ಗಳಿಕೆಯ ದಾಖಲೆಗಳನ್ನೇ ಮುರಿದು ಹಾಕಿದೆ.

ಬಾರದ ಲೋಕಕ್ಕೆ ಹೋದ ‘ಉಷಾ’: ತಪ್ಪು ಒಪ್ಪಿಕೊಂಡರೂ ಮನ್ನಿಸಲಿಲ್ಲವೇ ಈ ಸಮಾಜ?

​"ನಾನು ತಪ್ಪು ಮಾಡಿದ್ದು ನಿಜ, ಆದ್ರೆ ಈ ಕಿರುಕುಳ ತಾಳಲಾರೆ.." - ಕಣ್ಣೀರು ಹಾಕುತ್ತಲೇ ಸಾವಿನ ಮನೆ ಸೇರಿದ ಅಬಲೆ!

ಧಾರವಾಡ ಸೆಂಟ್ರಲ್ ಜೈಲ್ 'ಡ್ರಗ್ಸ್' ದಂಧೆ ಅಡ್ಡ: ಬೇಲಿಯೇ ಎದ್ದು ಹೊಲ ಮೇಯ್ದ ರಣರೋಚಕ ಸ್ಟೋರಿ!

ಕತ್ತಲಲ್ಲಿ ಖೈದಿಗಳಿಗೆ 'ಕಿಕ್' ನೀಡುತ್ತಿದ್ದ ಖಾಕಿಧಾರಿಗಳು: ಮುತಾಲಿಕ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರ ಮಿಡ್‌ನೈಟ್ ಆಪರೇಷನ್ ಸಕ್ಸಸ್!

ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!

ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!

ತುಂಗಭದ್ರಾ ನದಿಯ ಮಡಿಲಲ್ಲಿ ಕರಗಿದ ಕನಸುಗಳು: ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

ಮದುವೆಯ ಸಂಭ್ರಮದ ನಡುವೆ ಮರಣ ಮೃದಂಗ: ರಾಯಚೂರು ಕುಟುಂಬದಲ್ಲಿ ಆವರಿಸಿದ ಶೋಕದ ಕಾರ್ಮೋಡ

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಯಲು: ಡಾ. ಸಮೀಕ್ಷಾ ರೆಡ್ಡಿ ಸಾವಿನ ಸುತ್ತ ನಿಗೂಢ ಜಾಲ!

ಅಲ್ಲಿ ಎಲ್ಲವೂ ಸರಿಯಿಲ್ಲ!" - ವೈದ್ಯೆಯ ಕೊನೆಯ ವಾಟ್ಸಪ್ ಸಂದೇಶಗಳು ಬಯಲು ಮಾಡಿದ ಭೀಕರ ವಾಸ್ತವ!

Read all News