ಕಣ್ಣೀರು ಒರೆಸಿದ ಸರ್ಕಾರ: ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳ ಐದು ವರ್ಷಗಳ ಕತ್ತಲೆಗೆ ಕೊನೆಗೂ ಸಿಕ್ಕಿತು ಉದ್ಯೋಗದ ಬೆಳಕು

Bengaluru Division:

Font size:

ಸಾವಿನ ನೋವಿನ ನಡುವೆ ಬದುಕಿನ ಭರವಸೆ; 21 ಕುಟುಂಬಗಳ ಸದಸ್ಯರಿಗೆ ನಾಳೆ ಮುಖ್ಯಮಂತ್ರಿಗಳಿಂದ ನೇಮಕಾತಿ ಆದೇಶ ಪತ್ರ ವಿತರಣೆ..

ಬೆಂಗಳೂರು :​ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅಂದು ಆಕ್ಸಿಜನ್ ಕೊರತೆಯಿಂದ ಉಸಿರು ನಿಂತು ಹೋದಾಗ, ಕೇವಲ 36 ಜೀವಗಳು ಮಣ್ಣಾಗಲಿಲ್ಲ, ಬದಲಿಗೆ ಅಷ್ಟೂ ಕುಟುಂಬಗಳ ಭವಿಷ್ಯವೇ ಕತ್ತಲಿಗೆ ತಳ್ಳಲ್ಪಟ್ಟಿತ್ತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಆ ಕರಾಳ ಘಟನೆ ನಡೆದು ಐದು ಸುದೀರ್ಘ ವರ್ಷಗಳೇ ಉರುಳಿವೆ. ಅಂದಿನಿಂದ ಇಂದಿನವರೆಗೆ ಕಣ್ಣೀರಿನಲ್ಲೇ ಕೈತೊಳೆಯುತ್ತಾ, ಬದುಕಿನ ಬಂಡಿ ಎಳೆಯಲು ಹೋರಾಡುತ್ತಿದ್ದ ಸಂತ್ರಸ್ತ ಕುಟುಂಬಗಳಿಗೆ ಈಗ ಕೊನೆಗೂ ನ್ಯಾಯ ಸಿಕ್ಕಿದೆ. ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ 21 ವಾರಸುದಾರರಿಗೆ ಸರ್ಕಾರಿ ಕೆಲಸ ನೀಡುವ ಮೂಲಕ ಸರ್ಕಾರ ಮಾನವೀಯತೆ ಮೆರೆದಿದೆ. ಈ ಐತಿಹಾಸಿಕ ಕ್ಷಣಕ್ಕೆ ಮಂಗಳವಾರ ಸಾಕ್ಷಿಯಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರ್ಹ ಫಲಾನುಭವಿಗಳಿಗೆ ಅಧಿಕೃತವಾಗಿ ನೇಮಕಾತಿ ಆದೇಶ ಪತ್ರಗಳನ್ನು ಹಸ್ತಾಂತರಿಸಲಿದ್ದಾರೆ.

​ಈ ಹೋರಾಟದ ಹಾದಿ ಸುಲಭದ್ದಾಗಿರಲಿಲ್ಲ. ಪತಿಯನ್ನು ಕಳೆದುಕೊಂಡು ಮಕ್ಕಳ ಭವಿಷ್ಯಕ್ಕಾಗಿ ಸಣ್ಣಪುಟ್ಟ ಕೆಲಸ ಮಾಡುತ್ತಾ ದಿನದೂಡುತ್ತಿದ್ದ ಸೌಮ್ಯಾ ಅವರಂತಹ ಅದೆಷ್ಟೋ ಮನಸುಗಳು ಇಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. "ನನ್ನ ಪತಿ ದೊಡ್ಡಯ್ಯ ಅವರ ಅಗಲಿಕೆ ನಮ್ಮನ್ನು ಬೀದಿಗೆ ತಳ್ಳಿತ್ತು, ಇಂದು ನನ್ನ ಮಗ ಶಶಾಂಕ್ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿದ್ದಾನೆ, ಅವನಿಗೆ ಸರ್ಕಾರಿ ಕೆಲಸ ಸಿಗುತ್ತಿರುವುದು ನಮ್ಮ ಪಾಲಿನ ದೊಡ್ಡ ಆಸರೆ" ಎನ್ನುವ ಸೌಮ್ಯಾ ಅವರ ಮಾತುಗಳಲ್ಲಿ ದಶಕದ ನೋವು ಮತ್ತು ಇಂದಿನ ಸಮಾಧಾನ ಎರಡೂ ಅಡಗಿದೆ. ಬಹುತೇಕರಿಗೆ ಅವರ ವಿದ್ಯಾರ್ಹತೆಗೆ ತಕ್ಕಂತೆ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲೇ (CIMS) ಡಿ-ಗ್ರೂಪ್ ಹಾಗೂ ಚಾಲಕರ ಹುದ್ದೆಗಳನ್ನು ನೀಡಲಾಗುತ್ತಿದ್ದು, ಇದು ಆ ಕುಟುಂಬಗಳಿಗೆ ಹೊಸ ಜೀವನ ನೀಡಲಿದೆ.

​ಈ ಹಿಂದೆ 'ಭಾರತ ಜೋಡೋ ಯಾತ್ರೆ'ಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಸಂತ್ರಸ್ತ ಕುಟುಂಬಗಳನ್ನು ಭೇಟಿಯಾಗಿ ನೀಡಿದ್ದ ಭರವಸೆ ಇಂದು ಸಾಕಾರಗೊಂಡಂತಾಗಿದೆ. ತನಿಖಾ ಸಮಿತಿಯ ವರದಿ ಹಾಗೂ ಸಚಿವ ಸಂಪುಟದ ವಿಶೇಷ ಕಾಳಜಿಯಿಂದಾಗಿ ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮೃತಪಟ್ಟವರನ್ನು ಮರಳಿ ತರಲು ಸಾಧ್ಯವಿಲ್ಲದಿದ್ದರೂ, ಅವರ ನೆರಳಿನಲ್ಲಿ ಬದುಕುತ್ತಿದ್ದ ಕುಟುಂಬಗಳಿಗೆ ಈ ಉದ್ಯೋಗದ ಆಸರೆ ಒಂದು ಗೌರವಯುತ ಬದುಕನ್ನು ಕಟ್ಟಿಕೊಡಲಿದೆ. ಇದು ಕೇವಲ ಉದ್ಯೋಗದ ಹಂಚಿಕೆಯಲ್ಲ, ವ್ಯವಸ್ಥೆಯೊಂದು ತಪ್ಪು ಮಾಡಿದಾಗ ಅದನ್ನು ಸರಿಪಡಿಸುವ ಮೂಲಕ ತೋರಿದ ಮಾನವೀಯ ಸಂವೇದನೆ.

Comments

Leave a Comment

Prev Post ಲೈಕ್ಸ್ ಬೆನ್ನತ್ತಿ ಮೃತ್ಯುಲೋಕಕ್ಕೆ ಸೇರಿದ ಸಹೋದರರು: ರೀಲ್ಸ್ ಹುಚ್ಚಾಟಕ್ಕೆ ಬಲಿಯಾಯ್ತು ಮೂರು ಜೀವ!
Next Post ಭಾರತ ಈಗ ವಿಶ್ವಗುರುವಲ್ಲ, ಆ ಪದ ಬಳಸುವುದನ್ನು ನಿಲ್ಲಿಸಿ': ಸ್ವಪಕ್ಷದ ವಿರುದ್ಧವೇ ಮುರಳಿ ಮನೋಹರ್ ಜೋಶಿ ಅಸಮಾಧಾನ

ಪೊಲೀಸ್ ವರ್ಸಸ್ ಪೊಲೀಸ್: ಖಾಕಿ ಪಡೆಯಲ್ಲಿ ಆಂತರಿಕ ‘ದಂಗಲ್’!

ಇನ್ಸ್‌ಪೆಕ್ಟರ್‌ಗೆ ಕಿರುಕುಳ, ಕಮಿಷನರ್ ವಿರುದ್ಧ ಎಸ್‌ಪಿ ಪತ್ರ; ಪೊಲೀಸ್ ವ್ಯವಸ್ಥೆಯ ‘ಉಳುಕು’ ಬಿಚ್ಚಿಟ್ಟ ಸರಣಿ ಆರೋಪಗಳು!

ರಾಜ್ಯಸಭೆಯ ಸಚಿವಾಲಯದ ಕಾರ್ಯದರ್ಶಿಯಾಗಿ ಕೋಲಾರದ ಕೆ.ಎಸ್. ಸೋಮಶೇಖರ್ ನೇಮಕ: ಈ ಸಾಧನೆ ಮಾಡಿದ ಕರುನಾಡಿನ ಮೊದಲ ಅಧಿಕಾರಿ!

ಶ್ರೀನಿವಾಸಪುರದ ಪುಟ್ಟ ಹಳ್ಳಿಯಿಂದ ಸಂಸತ್ತಿನ ಉನ್ನತ ಹುದ್ದೆಯವರೆಗೆ; ದೇವೇಗೌಡರ ಬೆಂಬಲ, ಹನುಮಂತಪ್ಪನವರ ಮಾರ್ಗದರ್ಶನ ಸ್ಮರಿಸಿದ ಸೋಮಶೇಖರ್

ಸೈಕಲ್ ಸವಾರನಿಗೂ ಟೋಲ್ ಬರೆ: ಇದು ತೆರಿಗೆಯೋ ಅಥವಾ ಹಗಲು ದರೋಡೆಯೋ?

ಪರಿಸರ ಪ್ರೇಮಿಗಳ ಜೇಬಿಗೆ ಕತ್ತರಿ ಹಾಕಿದ ಬೆಂಗಳೂರಿನ ‘ಟೋಲ್ ಮಾಫಿಯಾ’: ಶೂನ್ಯ ಇಂಧನ ವಾಹನಕ್ಕೂ ಶುಲ್ಕ ವಸೂಲಿ ಮಾಡುವ ಅಮಾನವೀಯತೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ!

ಕೋಲಾರ ಆಡಳಿತ ಯಂತ್ರಕ್ಕೆ ಡಿಸಿ ಚಾಟಿಯೇಟು: ಆರು ತಹಶೀಲ್ದಾರ್‌ಗಳ ನಿದ್ದೆಗೆಡಿಸಿದ ‘ಶೋಕಾಸ್’ ನೋಟಿಸ್!

ರಾಷ್ಟ್ರೀಯ ಕಾರ್ಯದಲ್ಲಿ ಬೇಜವಾಬ್ದಾರಿತನ: 24 ಗಂಟೆಯೊಳಗೆ ಉತ್ತರ ನೀಡದಿದ್ದರೆ ಶಿಸ್ತು ಕ್ರಮದ ಉರುಳು!

Read all News