ಹೊಸ್ತಿಲ ಮೇಲಿನ ಆಟವೇ ಮಗುವಿನ ಕೊನೆಯಾಟ: ಪೂಜೆಯ ಹೂವಿಗೆ ಬಲಿಯಾಯ್ತು ಆರು ತಿಂಗಳ ಪುಟ್ಟ ಕಂದಮ್ಮ!

Mysuru:

Font size:

ಕೊನೆಯವರೆಗೂ ಉಸಿರಾಡಲು ಹೋರಾಡಿದ ಪುಟಾಣಿ ಚಿನ್ಮಯಿ

ಮೈಸೂರು:

ಕಣ್ಣು ಬಿಟ್ಟು ಜಗತ್ತನ್ನೇ ಸರಿಯಾಗಿ ನೋಡಿರದ ಆ ಕಂದಮ್ಮನಿಗೆ ಆ ಹೊಸ್ತಿಲ ಮೇಲಿನ ಆಟವೇ ಕೊನೆಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವಿನ ಒಂದು ಸಣ್ಣ ತುಂಡು, ಇಂದು ಒಂದು ಸುಂದರ ಕುಟುಂಬದ ನಂದಾದೀಪವನ್ನೇ ಆರಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಸಂಭವಿಸಿದ ಈ ಘಟನೆ ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ನೋವಿನ ಕಥೆ ಹೀಗಿದೆ:

ದೊಡ್ಡಹೆಜ್ಜೂರಿನ ಸುದರ್ಶನ್ ಮತ್ತು ನವ್ಯ ದಂಪತಿಯ ಎರಡನೇ ಪುತ್ರ, ಆರೂವರೆ ತಿಂಗಳ ಮುದ್ದು ಕಂದ ಚಿನ್ಮಯಿಗೌಡ. ಶನಿವಾರದ ಆ ಸಂಜೆ ಮನೆಯ ಹೊಸ್ತಿಲಲ್ಲಿ ಚಿನ್ಮಯಿ ತನ್ನ ಅಣ್ಣನ ಜೊತೆ ಮುದ್ದಾಗಿ ಆಟವಾಡುತ್ತಿದ್ದ. ಆಟದ ಗುಂಗಿನಲ್ಲಿದ್ದ ಮಗುವಿಗೆ ಹೊಸ್ತಿಲಲ್ಲಿ ಬಿದ್ದಿದ್ದ ಒಣಗಿದ ದಾಸವಾಳದ ಹೂವು ಕಂಡಿದೆ. ಕುತೂಹಲದಿಂದ ಮಗು ಅದನ್ನು ಬಾಯಿಗೆ ಹಾಕಿಕೊಂಡಿದೆ.

​ಆದರೆ ವಿಧಿಯ ಆಟವೇ ಬೇರೆಯಿತ್ತು. ಅಣ್ಣ ಅದನ್ನು ಕಿತ್ತುಕೊಳ್ಳುತ್ತಾನೆಂಬ ಸಣ್ಣ ಭಯದಿಂದ ಮಗು ಅದನ್ನು ನುಂಗಲು ಪ್ರಯತ್ನಿಸಿದೆ. ಆ ಕ್ಷಣವೇ ಆ ಹೂವಿನ ತುಂಡು ಮಗುವಿನ ಗಂಟಲಲ್ಲಿ ಸಿಲುಕಿಕೊಂಡಿದೆ. ಆ ಪುಟ್ಟ ಜೀವ ಉಸಿರಾಡಲು ಒದ್ದಾಡುತ್ತಿದ್ದಾಗ, ಮನೆಯವರ ಆತಂಕ ಮುಗಿಲು ಮುಟ್ಟಿತ್ತು.

ಕೈ ಕೊಟ್ಟ ಕಾಲ, ಮೌನವಾದ ಪ್ರಾಣ:

ತಕ್ಷಣವೇ ಮಗುವನ್ನು ಹನಗೋಡಿನ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ತಂದೆ-ತಾಯಿ ಮಗುವನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಆಸೆಯ ಕಣ್ಣುಗಳಿಂದ ಮೈಸೂರಿನ ಖಾಸಗಿ ಆಸ್ಪತ್ರೆಗೆ ಧಾವಿಸಿದರು. "ನಮ್ಮ ಮಗು ಮತ್ತೆ ಕಣ್ಣು ಬಿಡುತ್ತಾನೆ, ಮತ್ತೆ ನಮ್ಮ ಜೊತೆ ಆಟವಾಡುತ್ತಾನೆ" ಎಂಬ ಭರವಸೆ ಅವರಲ್ಲಿತ್ತು. ಆದರೆ ವೈದ್ಯರ ಶತಪ್ರಯತ್ನದ ನಡುವೆಯೂ, ಚಿಕಿತ್ಸೆ ಫಲಕಾರಿಯಾಗದೆ ಚಿನ್ಮಯಿ ಇಹಲೋಕ ತ್ಯಜಿಸಿದ್ದಾನೆ.

ಕರುಳು ಹಿಂಡುವ ದೃಶ್ಯ:

ಚಿನ್ನದಂತಹ ಮಗುವನ್ನು ಕಳೆದುಕೊಂಡ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ. "ಒಂದು ಹೂವು ನಮ್ಮ ಮಗುವಿನ ಪ್ರಾಣವನ್ನೇ ತಗೆಯುತ್ತದೆ ಎಂದು ನಮಗೆ ಗೊತ್ತಿರಲಿಲ್ಲ" ಎಂದು ಪೋಷಕರು ಹಳುತ್ತಿದ್ದ ದೃಶ್ಯ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆ ಮಾಡಿತು. ಪೂಜೆಗೆ ಅರ್ಪಿಸಬೇಕಿದ್ದ ಹೂವು, ಒಂದು ಪುಟ್ಟ ಜೀವವನ್ನೇ ಬಲಿಪಡೆದ ಈ ಘಟನೆ ಪ್ರತಿಯೊಬ್ಬ ಪೋಷಕರಿಗೂ ಎಚ್ಚರಿಕೆಯ ಗಂಟೆಯಾಗಿದೆ.

Comments

Leave a Comment

Prev Post ಮಧುಚಂದ್ರದ ಬೆನ್ನಲ್ಲೇ ಮಸಣ ಸೇರಿದ ವರ: ಸುದೀಪ್ ಸಾವು ಪ್ರೇಮ ವಿವಾಹದ ದುರಂತ ಅಂತ್ಯವೋ? ವ್ಯವಸ್ಥಿತ ಸಂಚೋ?
Next Post ಜೈಲೋ ಅಥವಾ ಅಪರಾಧಿಗಳ ಅಡ್ಡಾನೋ? ಬೆತ್ತಲಾಯ್ತು ಧಾರವಾಡ ಕಾರಾಗೃಹದ ಕರ್ಮಕಾಂಡ: ಪೋಕ್ಸೋ ಆರೋಪಿಯಿಂದಲೇ ಸಂತ್ರಸ್ತೆಗೆ 'ನೇಹಾ ಹಿರೇಮಠ್' ಗತಿ ಕಾಣಿಸುವ ಬೆದರಿಕೆ!

ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’

Kantara Chapter 1 box office: ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ 100 ಕೋಟಿಯ ಗಡಿಯತ್ತ ಸಿನಿಮಾ ದಾಪುಗಾಲು ಹಾಕಿದ್ದು ಆಯಾ ರಾಜ್ಯಗಳಲ್ಲಿ ಕೆಲ ಹೊಸ ದಾಖಲೆಗಳನ್ನು ಸಹ ಬರೆದಿದೆ. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾಗಳ ಗಳಿಕೆಯ ದಾಖಲೆಗಳನ್ನೇ ಮುರಿದು ಹಾಕಿದೆ.

ಬಾರದ ಲೋಕಕ್ಕೆ ಹೋದ ‘ಉಷಾ’: ತಪ್ಪು ಒಪ್ಪಿಕೊಂಡರೂ ಮನ್ನಿಸಲಿಲ್ಲವೇ ಈ ಸಮಾಜ?

​"ನಾನು ತಪ್ಪು ಮಾಡಿದ್ದು ನಿಜ, ಆದ್ರೆ ಈ ಕಿರುಕುಳ ತಾಳಲಾರೆ.." - ಕಣ್ಣೀರು ಹಾಕುತ್ತಲೇ ಸಾವಿನ ಮನೆ ಸೇರಿದ ಅಬಲೆ!

ಧಾರವಾಡ ಸೆಂಟ್ರಲ್ ಜೈಲ್ 'ಡ್ರಗ್ಸ್' ದಂಧೆ ಅಡ್ಡ: ಬೇಲಿಯೇ ಎದ್ದು ಹೊಲ ಮೇಯ್ದ ರಣರೋಚಕ ಸ್ಟೋರಿ!

ಕತ್ತಲಲ್ಲಿ ಖೈದಿಗಳಿಗೆ 'ಕಿಕ್' ನೀಡುತ್ತಿದ್ದ ಖಾಕಿಧಾರಿಗಳು: ಮುತಾಲಿಕ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರ ಮಿಡ್‌ನೈಟ್ ಆಪರೇಷನ್ ಸಕ್ಸಸ್!

ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!

ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!

ತುಂಗಭದ್ರಾ ನದಿಯ ಮಡಿಲಲ್ಲಿ ಕರಗಿದ ಕನಸುಗಳು: ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

ಮದುವೆಯ ಸಂಭ್ರಮದ ನಡುವೆ ಮರಣ ಮೃದಂಗ: ರಾಯಚೂರು ಕುಟುಂಬದಲ್ಲಿ ಆವರಿಸಿದ ಶೋಕದ ಕಾರ್ಮೋಡ

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಯಲು: ಡಾ. ಸಮೀಕ್ಷಾ ರೆಡ್ಡಿ ಸಾವಿನ ಸುತ್ತ ನಿಗೂಢ ಜಾಲ!

ಅಲ್ಲಿ ಎಲ್ಲವೂ ಸರಿಯಿಲ್ಲ!" - ವೈದ್ಯೆಯ ಕೊನೆಯ ವಾಟ್ಸಪ್ ಸಂದೇಶಗಳು ಬಯಲು ಮಾಡಿದ ಭೀಕರ ವಾಸ್ತವ!

Read all News