ಶಾಸಕಾಂಗ ಸಭೆಯಲ್ಲಿ 'ಕೈ' ಮುಖಂಡರ ರಣತಂತ್ರ: ಉಪಚುನಾವಣೆ ಗೆಲ್ಲುವುದು ಅನಿವಾರ್ಯ; ನಾಯಕರಿಗೆ ಸುರ್ಜೇವಾಲಾ ಟಾರ್ಗೆಟ್!

Karnataka:

Font size:

ನಾವು ಹಿಂದಿನ ಮೂರು ಉಪಚುನಾವಣೆಗಳನ್ನು ಗೆದ್ದಿದ್ದೇವೆ ಮತ್ತು ಈ ಎರಡೂ ಉಪಚುನಾವಣೆಗಳನ್ನು ಗೆಲ್ಲಲೇಬೇಕು ಎಂದು ಸುರ್ಜೇವಾಲಾ ಸೂಚಿಸಿದ್ದಾರೆ

ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಾಮಾನ್ಯವಾಗಿ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಹೇಗೆ ನಿಯಂತ್ರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು, ಆದರೆ ಬುಧವಾರ ನಡೆದ ಶಾಸಕಾಂಗ ಸಭೆ ವಿಭಿನ್ನವಾಗಿತ್ತು. ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಉಪ ಚುನಾವಣೆ ಬಗ್ಗೆ ಚರ್ಚಿಸಲಾಯಿತು, ಕಾಂಗ್ರೆಸ್ ನಾಯಕರ ಚರ್ಚೆ ಹೋಟೆಲ್ ಕೊಠಡಿಯನ್ನು ವಾರ್ ರೂಂ ಆಗಿ ಬದಲಾಯಿಸಿತ್ತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಭೆಯನ್ನು ಉಪ ಚುನಾವಣೆಯಲ್ಲಿ ಹೇಗೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಪ್ರಾರಂಭಿಸಿದರು. ಎನ್‌ಡಿಎ (ಬಿಜೆಪಿ-ಜೆಡಿಎಸ್) ವಿರುದ್ಧ "ಒಗ್ಗಟ್ಟಾಗಿ" ಹೋರಾಡಬೇಕು ಇಲ್ಲದಿದ್ದರೇ ಕ್ಷೇತ್ರಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದರು. ನಾವು ಹಿಂದಿನ ಮೂರು ಉಪಚುನಾವಣೆಗಳನ್ನು ಗೆದ್ದಿದ್ದೇವೆ ಮತ್ತು ಈ ಎರಡೂ ಉಪಚುನಾವಣೆಗಳನ್ನು ಗೆಲ್ಲಲೇಬೇಕು ಎಂದು ಸುರ್ಜೇವಾಲಾ ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಎಲ್ಲವನ್ನೂ ಬಿಟ್ಟು ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣಕ್ಕೆ ಹೋಗಲು ಯಾರು ಸಿದ್ಧರಿದ್ದಾರೆ ಎಂದು ಸುರ್ಜೇವಾಲಾ ಶಾಸಕರ ಬಳಿ ಕೇಳಿದಾಗ ಬಹುತೇಕ ಎಲ್ಲರೂ ಕೈ ಎತ್ತಿದರು. ಸರಿ ಹಾಗಾದರೆ ನೀವೆಲ್ಲರೂ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಿ ಎಂದು ಕರೆ ನೀಡಿದ್ದಾರೆ.

Comments

Leave a Comment

Prev Post ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’
Next Post IPL ಇತಿಹಾಸದಲ್ಲೇ ಅತಿದೊಡ್ಡ ಮಾರಾಟ: 16,000 ಕೋಟಿ ರೂ ಗೆ RCB ಸೇಲ್; ಹೊಸ ಮಾಲೀಕರು ಯಾರು ಗೊತ್ತಾ?

ಕೇಂದ್ರದ 'ತೈಲ ತಂತ್ರ'ಕ್ಕೆ ಡಿಕೆಶಿ ಗರಂ!

"ನಮ್ಮನ್ನ ಕೊಲೆ ಮಾಡ್ತಿದ್ದಾರೆ" ಎಂದು ಗುಡುಗಿದ ಕನಕಪುರ ಬಂಡೆ..!

ಡಾ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ: ನಗುತ್ತಾ ಪರಸ್ಪರ ಖುಷಿಯಾಗಿ ಕಂಡ ಮೋದಿ-ಖರ್ಗೆ

ಫೋಟೊದಲ್ಲಿ ಪ್ರಧಾನಿ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೈಕುಲುಕಿ, ಫೋಟೋ ತೆಗೆದುಕೊಳ್ಳಲು ಹಲವಾರು ನಾಯಕರನ್ನು ಕರೆಯುತ್ತಿರುವುದು ಕಾಣುತ್ತದೆ.

ನ್ಯಾಯದೀಪದ ಮುಂದೆ 'ಸಿದ್ಧಾಂತ'ದ ನೆರಳು? ಹೈಕೋರ್ಟ್‌ನಲ್ಲಿ ಕೇಜ್ರಿವಾಲ್ ಹೂಡಿದ 'ಬಿಗ್ ಫೈಟ್'!

​"RSS ಕಾರ್ಯಕ್ರಮಕ್ಕೆ ಹೋದವರಿಂದ ನ್ಯಾಯ ಸಿಗಲು ಸಾಧ್ಯವೇ?" - ನ್ಯಾಯಮೂರ್ತಿಗಳ ವಿರುದ್ಧವೇ ಅರವಿಂದ್ ಕೇಜ್ರಿವಾಲ್ ನೇರ ವಾರ್!

ಕಾಂಗ್ರೆಸ್‌ಗೆ ಮುಸ್ಲಿಂ ಸಂಘಟನೆಗಳ ‘ಮಹಾ ಎಚ್ಚರಿಕೆ’: "ನಾವು ಕೇವಲ ವೋಟ್ ಬ್ಯಾಂಕ್ ಅಲ್ಲ, ನಮ್ಮ ತಾಳ್ಮೆ ಪರೀಕ್ಷಿಸಬೇಡಿ!"

"ಹುದ್ದೆ ನೀಡುವುದು ನೀವು ಕೊಡುವ ಭಿಕ್ಷೆಯಲ್ಲ, ನಮ್ಮ ಹಕ್ಕು" - ದಾವಣಗೆರೆ ಉಪಚುನಾವಣೆ ಬೆಳವಣಿಗೆಗಳ ಬೆನ್ನಲ್ಲೇ ಕೈ ನಾಯಕರ ವಿರುದ್ಧ ಮುಸ್ಲಿಂ ಒಕ್ಕೂಟಗಳ ಜಂಟಿ ಆಕ್ರೋಶ!

ಸಿದ್ದು 'ಅಸಹಾಯಕ', ಡಿಕೆಶಿ 'ದಾರಿ ತಪ್ಪಿದ ಮಗ': ಕಾಂಗ್ರೆಸ್ ಅಂಗಳದಲ್ಲಿ ರಾಜಣ್ಣ ಸಿಡಿಸಿದ ಆಟಂ ಬಾಂಬ್!

ದೊರೆಗೆ ಇಲ್ಲದ ಶಿಕ್ಷೆ ನಮಗೇಕೆ?' ಶಿಸ್ತಿನ ಹೆಸರಲ್ಲಿ ಸಿದ್ದರಾಮಯ್ಯ ಆಪ್ತರ ಹನನಕ್ಕೆ ಶಾಸಕ ರಾಜಣ್ಣ ಕೆಂಡಾಮಂಡಲ!

Read all News