ವಿದ್ಯುತ್ ಸ್ಪರ್ಶಿಸಿ ಇಬ್ಬರು ಯುವ ಕಾರ್ಮಿಕರ ದಾರುಣ ಸಾವು - ನಿರ್ಲಕ್ಷ್ಯದ ಆರೋಪ!

Belagavi:

Font size:

ನಿರ್ಲಕ್ಷ್ಯ ಅಮಾಯಕರ ಇಬ್ಬರ ಬಲಿ

ಬೆಳಗಾವಿ : ಜಿಲ್ಲೆಯ ಸವದತ್ತಿ ತಾಲೂಕಿನ ನವೀಲುತೀರ್ಥ ಜಲಾಶಯದ ಬಳಿ ನಡೆದ ದಾರುಣ ಘಟನೆಯಲ್ಲಿ, ಕಲ್ಲು ಗಣಿಗಾರಿಕೆ ವೇಳೆ ವಿದ್ಯುತ್ ಸ್ಪರ್ಶಿಸಿ ಇಬ್ಬರು ಯುವ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕಲ್ಯಾಣ ಶೆಟ್ಟಿ ಅಸೋಸಿಯೇಷನ್ ಮಾಲಿಕತ್ವದ ಗಣಿಗಾರಿಕೆಯಲ್ಲಿ ನಡೆದಿದ್ದು, ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿವೆ.

ಮೃತರನ್ನು ಜಾರ್ಖಂಡ್ ರಾಜ್ಯದ ರವಿಕುಮಾರ್ ಸಿಂಗ್ (18), ಹಿಟಾಚಿ ಚಾಲಕ, ಮತ್ತು ಸುಭಾಷ್ ಸಿಂಗ್ (18), ಸಹಾಯಕ ಎಂದು ಗುರುತಿಸಲಾಗಿದೆ. ಕಲ್ಲು ಗಣಿಗಾರಿಕೆ ಸ್ಥಳದಲ್ಲಿ 11 ಕೆವಿ ವಿದ್ಯುತ್ ಸಂಪರ್ಕವನ್ನು ಪಡೆದಿದ್ದ ಗಣಿಗಾರಿಕೆ ಮಾಲೀಕರು, ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.

ಘಟನೆ ನಡೆದ ಸಂದರ್ಭದಲ್ಲಿ, ಹಿಟಾಚಿ ಯಂತ್ರದ ಬಕೆಟ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ, ಇಬ್ಬರು ಕಾರ್ಮಿಕರು ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಹಿಟಾಚಿಯಿಂದ ಕೆಳಗೆ ಜಿಗಿದರೂ, ಸಮೀಪದಲ್ಲಿದ್ದ ನೀರಿನಲ್ಲಿ ವಿದ್ಯುತ್ ಪ್ರವಹಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕೆಲಸ ಅರಸಿ ಜಾರ್ಖಂಡ್‌ನಿಂದ ಬಂದಿದ್ದ ಈ ಇಬ್ಬರು ಯುವ ಕಾರ್ಮಿಕರ ದುರ್ಮರಣಕ್ಕೆ ಗಣಿಗಾರಿಕೆ ಮಾಲೀಕರ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸವದತ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಾರ್ಮಿಕರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಘಟನೆ ಕಲ್ಲು ಗಣಿಗಾರಿಕೆ ಪ್ರದೇಶಗಳಲ್ಲಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Comments

Leave a Comment

Prev Post ಮಹಿಳಾ ಮೀಸಲಾತಿ ವಿರೋಧಿ ಕಾಂಗ್ರೆಸ್‌ಗೆ ಹೆಣ್ಣು ಕುಲವೇ ತಕ್ಕ ಪಾಠ ಕಲಿಸಲಿದೆ: ಶಾಸಕ ಜ್ಯೋತಿಗಣೇಶ್ ಆಕ್ರೋಶ!
Next Post ತಲಕಾಡಿನ ಕಾವೇರಿ ಮಡಿಲಲ್ಲಿ ಪ್ರವಾಸಿ ವಿದ್ಯಾರ್ಥಿಗಳ ಜಲಸಮಾಧಿ: ಶಾಲಾ ಪ್ರವಾಸದಲ್ಲಿ ಸಂಭವಿಸಿದ ಘೋರ ದುರಂತಕ್ಕೆ ಇಬ್ಬರು ಬಲಿ

ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಸಿನಿಮಾಗಳ ಹಿಂದಿಕ್ಕಿದ ‘ಕಾಂತಾರ 1’

Kantara Chapter 1 box office: ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ 100 ಕೋಟಿಯ ಗಡಿಯತ್ತ ಸಿನಿಮಾ ದಾಪುಗಾಲು ಹಾಕಿದ್ದು ಆಯಾ ರಾಜ್ಯಗಳಲ್ಲಿ ಕೆಲ ಹೊಸ ದಾಖಲೆಗಳನ್ನು ಸಹ ಬರೆದಿದೆ. ಉತ್ತರ ಭಾರತದಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಈಗಾಗಲೇ ಆಮಿರ್ ಖಾನ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರ ಹಿಟ್ ಸಿನಿಮಾಗಳ ಗಳಿಕೆಯ ದಾಖಲೆಗಳನ್ನೇ ಮುರಿದು ಹಾಕಿದೆ.

ಬಾರದ ಲೋಕಕ್ಕೆ ಹೋದ ‘ಉಷಾ’: ತಪ್ಪು ಒಪ್ಪಿಕೊಂಡರೂ ಮನ್ನಿಸಲಿಲ್ಲವೇ ಈ ಸಮಾಜ?

​"ನಾನು ತಪ್ಪು ಮಾಡಿದ್ದು ನಿಜ, ಆದ್ರೆ ಈ ಕಿರುಕುಳ ತಾಳಲಾರೆ.." - ಕಣ್ಣೀರು ಹಾಕುತ್ತಲೇ ಸಾವಿನ ಮನೆ ಸೇರಿದ ಅಬಲೆ!

ಧಾರವಾಡ ಸೆಂಟ್ರಲ್ ಜೈಲ್ 'ಡ್ರಗ್ಸ್' ದಂಧೆ ಅಡ್ಡ: ಬೇಲಿಯೇ ಎದ್ದು ಹೊಲ ಮೇಯ್ದ ರಣರೋಚಕ ಸ್ಟೋರಿ!

ಕತ್ತಲಲ್ಲಿ ಖೈದಿಗಳಿಗೆ 'ಕಿಕ್' ನೀಡುತ್ತಿದ್ದ ಖಾಕಿಧಾರಿಗಳು: ಮುತಾಲಿಕ್ ಎಚ್ಚರಿಕೆ ಬೆನ್ನಲ್ಲೇ ಪೊಲೀಸರ ಮಿಡ್‌ನೈಟ್ ಆಪರೇಷನ್ ಸಕ್ಸಸ್!

ಮಂಗಳೂರಿನಲ್ಲಿ ನೆತ್ತರು ಹರಿಸಿದ ಗ್ಯಾಂಗ್‌ವರ್: ತೊಕ್ಕೊಟ್ಟು ಫ್ಲೈಓವರ್ ಮೇಲೆ 'ಟಾಬ್ಲೆಟ್ ಆರಿಫ್' ಭೀಕರ ಕೊಲೆ!

ಸಿನಿಮೀಯ ಮಾದರಿಯಲ್ಲಿ ನಡೆದ ಹತ್ಯೆ: ಬೈಕ್ ಸವಾರನ ಮೇಲೆ ಕಾರ್ ಹರಿಸಿ, ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾದ ದುಷ್ಕರ್ಮಿಗಳು!

ತುಂಗಭದ್ರಾ ನದಿಯ ಮಡಿಲಲ್ಲಿ ಕರಗಿದ ಕನಸುಗಳು: ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ

ಮದುವೆಯ ಸಂಭ್ರಮದ ನಡುವೆ ಮರಣ ಮೃದಂಗ: ರಾಯಚೂರು ಕುಟುಂಬದಲ್ಲಿ ಆವರಿಸಿದ ಶೋಕದ ಕಾರ್ಮೋಡ

ಶಿವಮೊಗ್ಗದ ಲಯನ್ ಸಫಾರಿಯಲ್ಲಿ ಬೆಚ್ಚಿಬೀಳಿಸುವ ಸತ್ಯಗಳು ಬಯಲು: ಡಾ. ಸಮೀಕ್ಷಾ ರೆಡ್ಡಿ ಸಾವಿನ ಸುತ್ತ ನಿಗೂಢ ಜಾಲ!

ಅಲ್ಲಿ ಎಲ್ಲವೂ ಸರಿಯಿಲ್ಲ!" - ವೈದ್ಯೆಯ ಕೊನೆಯ ವಾಟ್ಸಪ್ ಸಂದೇಶಗಳು ಬಯಲು ಮಾಡಿದ ಭೀಕರ ವಾಸ್ತವ!

Read all News